Vivekananda Kendra Vidyalaya, Kallubalu Viveka Vigjyana ( Science Exhibition
Viveka Vignana (Science Exibition) 2023-24
ಆನೇಕಲ್ ತಾಲ್ಲೂಕು ಜಿಗಣಿ ಹೋಬಳಿಯ ಕಲ್ಲುಬಾಳು ವಿವೇಕಾನಂದ ಕೇಂದ್ರ ವಿದ್ಯಾಲಯದಲ್ಲಿ ದಿನಾಂಕ 1/12/2023 ಶುಕ್ರವಾರದಂದು ವಿವೇಕ ವಿಜ್ಞಾನ ಎಂಬ ಶಿರೋನಾಮೆಯ ಅಡಿಯಲ್ಲಿ ವಿಜ್ಞಾನ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿರುವಂತಹ ಶ್ರೀ ಪಳನಿ ಲೋಕನಾಥನ್ (CEO ಮತ್ತು ಪ್ರಿನ್ಸಿಪಲ್ ಕನ್ಸಲ್ಟೆಂಟ್ ಆಡಿಯೋ ಪ್ಲಾನೆಟ್ ಮ್ಯಾನೇಜಿಂಗ್ ಡೈರೆಕ್ಟರ್ ಅನಲೋಂಗನ್ ಪ್ರೈವೇಟ್ ಲಿಮಿಟೆಡ್)ಶ್ರೀ. ರಂಗರಾಜು ಸರ್ ( ವಿವೇಕಾನಂದ ಕೇಂದ್ರದ ಹಿತೈಷಿಗಳು)
ಶ್ರೀ. ನಾಗೇಶ್ ಜೀ ( ವಿದ್ಯಾಲಯ ಕಮಿಟಿಯ ವ್ಯವಸ್ಥಾ ಪ್ರಮುಖರು ) ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗಣ್ಯರನ್ನು ಸ್ವಾಗತಿಸಿ, ವೈಜ್ಞಾನಿಕ ಹಿನ್ನೆಲೆಯನ್ನು ಒಳಗೊಂಡ ನಾಟಕ ಮತ್ತು ಅಭಿನಯ ಗೀತೆಯು ಸಭೀಕರ ಮನಸೆಳೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿರುವಂತಹ ಶ್ರೀ ಪಳನಿ ಲೋಕನಾಥನ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ವೇದಿಕೆಯ ಕಾರ್ಯಕ್ರಮದ ನಂತರ ಗಣ್ಯರು ತರಗತಿಗೆ ತೆರಳಿ ಮಕ್ಕಳು ಮಾಡಿದ ವಿಜ್ಞಾನ ವಸ್ತುಗಳ ಮಾದರಿಯನ್ನು ವೀಕ್ಷಿಸಿ ಸಂತಸದ ಜೊತೆಗೆ ಮಕ್ಕಳಿಗೆ ಸ್ಪೂರ್ತಿ ನೀಡಿದರು. ಅತ್ಯಂತ ಸೊಗಸಾಗಿ ಮೂಡಿಬಂದ ಈ ಕಾರ್ಯಕ್ರಮದಲ್ಲಿ ಸಮೀಪದ ತಪೋವನ ಶಾಲೆ, ಗ್ಲೋಬಲ್ ಅಕಾಡೆಮಿ, ಗ್ರೀನ್ ವ್ಯಾಲಿ ಶಾಲೆಯ ಮಕ್ಕಳು ವೀಕ್ಷಕರಾಗಿ ಒಟ್ಟು 200 ಕ್ಕೂ ಹೆಚ್ಚು ಮಕ್ಕಳು ಶಿಕ್ಷಕರೊಂದಿಗೆ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ವೈಜ್ಞಾನಿಕ ಹಿನ್ನೆಲೆಯ ಸಾರವನ್ನು ತಿಳಿದುಕೊಂಡರು. ಪೋಷಕರು, ಪಾಲಕರು, ಕೇಂದ್ರದ ಹಿತೈಷಿಗಳು ಭಾಗವಹಿಸಿದ್ದರು. ಶಾಲೆಯಲ್ಲಿ ಕಲಿತು ಹೋದ ಹಳೆಯ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು. 683 ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಸಾದವನ್ನು ಸ್ವೀಕರಿಸಿ ಮನೆಗೆ ತೆರಳಿದರು.
Comments
Post a Comment